Breaking
Mon. Dec 23rd, 2024

ಕಾರ್ಮಿಕ ಇಲಾಖೆಯಲ್ಲಿ ಕಳ್ಳತನವಾಗಿದ್ದ ಲ್ಯಾಪ್‌ ಟಾಪ್‌ ಗಳ ವಶ

ಹುಬ್ಬಳ್ಳಿಯ ಕಾರ್ಮಿಕರ ಭವನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ತಂದು ಇಟ್ಟಿದ್ದ ಲ್ಯಾಪ್‌ ಟಾಪ್‌ಗಳು ಕಳ್ಳತನವಾಗಿರುವ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದರಿ ಕಳ್ಳತನ ಪ್ರಕರಣವನ್ನು ಬೇಧಿಸಲು ಮಾನ್ಯ ಪೊಲೀಸ್ ಆಯುಕ್ತರವರು ‘ಕಾನೂನು ಸುವ್ಯವಸ್ಥೆ ಡಿಸಿಪಿ ರವರಾದ ಶ್ರೀ ರವೀಶ ಸಿ.ಆರ್ ರವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪವಿಭಾಗದ ಎಸಿಪಿ ಶ್ರೀ ಉಮೇಶ ಚಿಕ್ಕಮಠ ರವರ ನೇತೃತ್ವದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಎಸ್.ಹೆಚ್. ಯಳ್ಳೂರ ಮತ್ತರವರ ಠಾಣೆಯ ಸಿಬ್ಬಂದಿ ಜನರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ಇಬ್ಬರು ಅನುಮಾನಸ್ಪದವಾಗಿ ಕಂಡು ಬಂದ ಕೃಷ್ಣಾ ಮತ್ತು ದೀಪಕ ಎಂಬ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು. ಈ ಇಬ್ಬರು ತಮ್ಮ ಸಹಚರರೊಂದಿಗೆ ಕಳ್ಳತನ ಮಾಡಿದ್ದು ಕಂಡುಬಂದಿದ್ದು, ಇವರೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಗರಾಜ, ಸುಭಾಷ ಶ್ರೀನಿವಾಸ ಮತ್ತು ದರ್ಶನ ಎಂಬ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನ ಮಾಡಲು ಮತ್ತು ಕದ್ದ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಲು ಸಹಕರಿಸಿದ್ದ ಮಹಿಳೆಯೊಬ್ಬಳನ್ನು ಒಳಗೊಂಡ 20 ಜನ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂದಪಟ್ಟಂತೆ ಒಟ್ಟು 26 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಂಡವು ಯಶಸ್ವಿಯಾಗಿದ್ದು, ಬಂಧಿತರಿಂದ ಕಳ್ಳತನವಾಗಿದ್ದ 45 ಲಕ್ಷ ರೂ ಮೌಲ್ಯದ 83 ಲ್ಯಾಪ್ ಟಾಪ್‌ಗಳು, ಕೃತ್ಯಕ್ಕೆ ಬಳಸಿದ ಕಾರ್, 2 ಆಟೋ ಮತ್ತು 02 ಬೈಕ್ ಸೇರಿದಂತೆ ಒಟ್ಟು 60 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿರುತ್ತಾರೆ.

ಸದರಿ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಮತ್ತವರ ಠಾಣೆಯ ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Related Post

Leave a Reply

Your email address will not be published. Required fields are marked *