ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂತರ್ ಜಿಲ್ಲಾ ಆರೋಪಿಯಾದ ಗೌನಿ ನರೇಂದ್ರ ರೆಡ್ಡಿ ಎಂಬ ಆರೋಪಿಯನ್ನು ಬಂಧಿಸಿದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ PI ರವರಾದ ಶ್ರೀ M.M ತಹಶೀಲ್ದಾರ್ ರವರ ನೇತೃತ್ವದ ತಂಡವು, ಕಳ್ಳತನವಾಗಿದ್ದ ಬೈಕ್ ನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ವೇಳೆ ಇದೇ ಆರೋಪಿತನು ದಾವಣಗೆರೆ, ಹರಿಹರ, ಬಳ್ಳಾರಿ ಮತ್ತು ಧಾರವಾಡದಲ್ಲಿ 5 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ಕಂಡುಬಂದಿದ್ದು, ಸದರಿ ಆರೋಪಿತನಿಂದ ಕಳ್ಳತನವಾಗಿದ್ದ 3 ಲಕ್ಷ ರೂ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.