ಹುಬ್ಬಳ್ಳಿ ನಗರದ ಹೆಸ್ಕಾಂ ಕಚೇರಿಯಲ್ಲಿ ಇಂದು ಹೆಸ್ಕಾಂನ ಅಧ್ಯಕ್ಷರಾಗಿ ನೇಮಕವಾದ ಶ್ರೀ ಸೈಯದ್ ಅಜೀಂ ಪೀರ್ ಖಾದ್ರಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ, ಖಾದ್ರಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದೊಡ್ಡ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದೆ.ಇದಕ್ಕೂ ಮೊದಲು ಹಲಗೂರ ಗ್ರಾಮದ ಶ್ರೀ ಹಜರತ್ ಸೈಯದ್ ಶಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಲಾಯಿತು.ಈ ಸಂದರ್ಭದಲ್ಲಿ ಸಚಿವ ಶ್ರೀ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶ್ರೀ ನಸೀರ್ ಅಹ್ಮದ್, ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾನ್ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.