Breaking
Sun. Dec 22nd, 2024

ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಆದೇಶಿಸಲು ಉತ್ತರ ಕರ್ನಾಟಕ ಅಂಜುಮನ್ ಸಂಸ್ಥೆ ಹುಬ್ಬಳ್ಳಿ ವತಿಯಿಂದ ಮಾನ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು

ನಿನ್ನೆಯ ದಿವಸ ದಿನಾಂಕ 8.12.2024ರಂದು ಹುಬ್ಬಳ್ಳಿಯ ರೈಲ್ವೆ ಭವನಕ್ಕೆ ಧಾರವಾಡ ಬೆಳಗಾವ್ ರೈಲು ಮಾರ್ಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ನಮ್ಮ ನೆಚ್ಚಿನ ಕೇಂದ್ರ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣನವರು ಆಗಮಿಸಿದಾಗ ನಮ್ಮ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಹಾಗೂ ಹಿಂದುಳಿದ ಜಿಲ್ಲೆಯಾದ ಕೊಪ್ಪಳ ಜಿಲ್ಲೆ, ಸರಕಾರಿ ವೈದ್ಯಕೀಯ ಕಾಲೇಜ್ ರಸ್ತೆ ಮಾರ್ಗದಲ್ಲಿರುವ ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಆದೇಶಿಸಲು ಉತ್ತರ ಕರ್ನಾಟಕ ಅಂಜುಮನ್ ಸಂಸ್ಥೆ ಹುಬ್ಬಳ್ಳಿ ವತಿಯಿಂದ ಮಾನ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹುಬ್ಬಳ್ಳಿ ಧಾರವಾಡ -73ರ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕರಾದ ಶ್ರೀ ಅರವಿಂದ್ ಬೆಲ್ಲದ ಹುಬ್ಬಳ್ಳಿ ಧಾರವಾಡ ಕೇಂದ್ರ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ರೇಲ್ವೇ ಇಲಾಖೆಯ ಮುಖ್ಯ ಪ್ರತಿಬಂಧಕರು ಇಲಾಖೆ ಅಧಿಕಾರಿಗಳು ಸಂಸ್ಥೆಯ ಅಧ್ಯಕ್ಷರಾದ ಎಚ್ಎಂ ಕೊಪ್ಪದ ಹಾಗೂ ಶ್ರೀ ಎಂ ಎಂ ಹೊಸೂರ ಉಪಸ್ಥಿತರಿದ್ದರು

Related Post

2 thoughts on “ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಆದೇಶಿಸಲು ಉತ್ತರ ಕರ್ನಾಟಕ ಅಂಜುಮನ್ ಸಂಸ್ಥೆ ಹುಬ್ಬಳ್ಳಿ ವತಿಯಿಂದ ಮಾನ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು”

Leave a Reply

Your email address will not be published. Required fields are marked *