Breaking
Sun. Dec 22nd, 2024

ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಐವರು ಆರೋಪಿಗಳ ಬಂಧನ

ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಐವರು ಆರೋಪಿಗಳ ಬಂಧನ ಇತ್ತೀಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಚುಡಾಯಿಸಿದ್ದರ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದ್ದವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಕುರಿತು ವಿಡಿಯೋಗಳು ಹರಿದಾಡಿದ್ದವು. ಈ ಘಟನೆಗೆ ಸಂಬಂಧಪಟ್ಟಂತೆ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ BNS ಮತ್ತು POCSO ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ S H ಯಳ್ಳೂರ ಮತ್ತವರ ಸಿಬ್ಬಂದಿಜನರನ್ನು ಒಳಗೊಂಡ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಪ್ರಕರಣ ದಾಖಲಾದ ಕೇವಲ ಎರಡು ಗಂಟೆಗಳ ಒಳಗೇ ಹಳೇ ಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿಗಳಾದ ಶುಭಂ ತಡಸ ಮತ್ತು ಮೆಹಬೂಬ್ ಹಿತ್ತಲಮನಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು,ಸದರಿ ಬಾಲಕಿಯನ್ನು ಚುಡಾಯಿಸಲು ಈ ಇಬ್ಬರು ಆರೋಪಿಗಳೊಂದಿಗೆ ಸಹಕರಿಸಿದ ಸಾಗರ್ ಸಾತಪುತೆ, ಶ್ರೀವತ್ಸ ಬೆಂಡಿಗೇರಿ, ಸಚಿನ್ ನರೇಂದ್ರ (ಮೂವರು ನವ ಅಯೋಧ್ಯ ನಗರ ನಿವಾಸಿಗಳು) ಎಂಬ ಮೂವರು ಆರೋಪಿಗಳನ್ನು ಸಹ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರಿಂದ 06 ಮೊಬೈಲ್ ಫೋನ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪಶಪಡಿಸಿಕೊಳ್ಳಲಾಗಿದೆ. ಶುಭಂ ತಡಸ ಎಂಬಾತನ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 2 ಪ್ರಕರಣಗಳು ದಾಖಲಾಗಿರುತ್ತವೆ. ಸಾಗರ್ ಸಾತಪುತೆ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 2 ಪ್ರಕರಣಗಳು ದಾಖಲಾಗಿರುತ್ತವೆ.ಸಚಿನ್ ನರೇಂದ್ರ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 1 ಪ್ರಕರಣ ದಾಖಲಾಗಿರುತ್ತದೆ.ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹಳೆ ಹುಬ್ಬಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್ ಎಚ್ ಎಳ್ಳೂರ್, ಪಿಎಸ್ಐ ರುದ್ರಪ್ಪ ಗುಡುದರಿ, ಎಎಸ್ಐ ಪಿ.ಬಿ ಕಾಳೆ, ಮತ್ತು ಸಿಬ್ಬಂದಿ ಜನರಾದ ಫಕ್ಕೀರೇಶ ಗೊಬ್ಬರಗುಂಪಿ, ಅಭಯ್ ಕನ್ನಳ್ಳಿ, ನಾಗರಾಜ್ ಕೆಂಚಣ್ಣವರ್, ಕೃಷ್ಣ ಮೋಟೆಬೆನ್ನೂರ್, ಸಂತೋಷ್ ವಲ್ಯಾಪುರ್, ರಮೇಶ್ ಹಲ್ಲೆ ಕಲ್ಲನಗೌಡ ಗುರನಗೌಡ, ವಿಟ್ಟಲ್ ಹೊಸಳ್ಳಿ, ಜಗದೀಶ್ ಗೌಂಡಿ ರವರುಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

Related Post

Leave a Reply

Your email address will not be published. Required fields are marked *